ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಮಸ್ತೇನಹಳ್ಳಿ, ಚಿಕ್ಕಬಳ್ಳಾಪುರ (ಸಿಬಿಎಸ್‌ಇ)

ಕರ್ನಾಟಕ ಸರ್ಕಾರ

ಶ್ರೀ.ರಾಘವೇಂದ್ರ ಟಿ. ಕೆ.ಎ.ಎಸ್.
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ

ನಾಗಯ್ಯ
ಪ್ರಾಂಶುಪಾಲರು

ಸುತ್ತೋಲೆಗಳು ಮತ್ತು ಅಧಿಸೂಚನೆಗಳು

Notification 2 (2021-12-28 16:45:00)

Notification 1 (2021-12-28 16:44:42)

ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಮಸ್ತೇನಹಳ್ಳಿ, ಚಿಕ್ಕಬಳ್ಳಾಪುರ (ಸಿಬಿಎಸ್‌ಇ)

 

ಈ ಶಾಲೆಯು ಚಿಕ್ಕಬಳ್ಳಾಪುರ ಜಿಲ್ಲೆಯ, ಚಿಂತಾಮಣಿ ತಾಲ್ಲೂಕಿನ ಕರ್ನಾಟಕದ ಪ್ರಸಿದ್ದ ಯಾತ್ರಾ ಸ್ಥಳವಾದ ಕೈವಾರದಿಂದ ಸುಮಾರು ೩.೫ ಕಿ.ಮೀ ದೂರದಲ್ಲಿದ್ದು, ೨೦೧೦-೧೧ನೇ ಸಾಲಿನಿಂದ ಕಾರ್ಯಾರಂಭವಾಗಿರುತ್ತದೆ. ಸುಮಾರು ೮ ಎಕರೆ ವಿಶಾಲವಾದ ಪ್ರಶಾಂತ ಸ್ಥಳದಲ್ಲಿದ್ದು, ಹೂ, ಹಣ್ಣು, ಹಸಿರು ಗಿಡಗಳಿಂದ ಕೂಡಿದ ಸುಂದರವಾದ, ಮನಸ್ಸಿಗೆ ಮುದ ನೀಡುವ ಆಕರ್ಷಕ ವಾತಾವರಣದಿಂದ ಕೂಡಿರುತ್ತದೆ. ಶಾಲೆಯು ಸ್ವಚ್ಛತೆಯ ನಿರ್ವಹಣೆ, ಆಕರ್ಷಕ ಕಾರ್ಯಕ್ರಮಗಳು, ಉತ್ತಮ ಆಡಳಿತ, ಶೈಕ್ಷಣಿಕ ಗುಣಮಟ್ಟ ಇತ್ಯಾದಿಗಳಿಂದ ನಾಡಿನ ಮನೆ ಮಾತಾಗಿದ್ದು, ರಾಜ್ಯದಲ್ಲಿಯೇ ಅತ್ಯುತ್ತಮ ವಸತಿ ಶಾಲೆಯೆಂಬ ಹೆಗ್ಗಳಿಕೆ ಹೊಂದಿದೆ. ವಿಶಾಲವಾದ ತರಗತಿ ಕೊಠಡಿಗಳು, ಪ್ರಾರ್ಥನಾ ಮಂದಿರ, ಗಣಕಯಂತ್ರ, ಗಣಿತ, ವಿಜ್ಞಾನ ಪ್ರಯೋಗಾಲಯಗಳು, ವಿಶಾಲವಾದ ಕ್ರೀಡಾಂಗಣ, ಆಕರ್ಷಕ ಮಲ್ಟಿಪರ್ಪಸ್ ಹಾಲ್, ತೆರೆದ ಜಿಮ್‌ಗಳಿಂದ ಕೂಡಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಸಹಾಯಕವಾಗಿದ್ದು, ಕ್ರೀಡೆಯಲ್ಲಿ ರಾಜ್ಯಮಟ್ಟದ ಪ್ರತಿಭೆಗಳನ್ನು ಹೊರತಂದಿದೆ. ಸ್ವಚ್ಛತೆಯಲ್ಲಿ “ಸ್ವಚ್ಛ ವಿದ್ಯಾಲಯ ಪುರಸ್ಕಾರ” ಪಡೆದಿದೆ. ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಅತ್ಯುತ್ತಮ ಫಲಿತಾಂಶ ನೀಡುವ ಶಾಲೆಯಾಗಿದ್ದು, ನಾಡಿನ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳನ್ನು ಅತ್ಯತ್ತಮ ನಾಗರೀಕರನ್ನಾಗಿ ತಯಾರುಮಾಡುವ ಕಾರ್ಯದಲ್ಲಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕವರ್ಗ ಕಾರ್ಯಪ್ರೌರುತ್ತವಾಗಿರುತ್ತಾರೆ.
ಬಹುತೇಕ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಗಳಲ್ಲಿ ಉತ್ತೀರ್ಣರಾಗುತ್ತಿದ್ದು, ಪದವಿ, ಎಂಜಿನಿಯರಿAಗ್, ನರ್ಸಿಂಗ್ ಇನ್ನೂ ಮುಂತಾದ ಉನ್ನತ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಹಿರಿಮೆ ಹೆಚ್ಛಿಸುತ್ತಿದ್ದಾರೆ. ಮೂಲಭೂತ ಸೌಕರ್ಯ, ಸ್ವಚ್ಛತೆ ನಿರ್ವಹಣೆಯಲ್ಲಿ ಇದೊಂದು ಅತ್ಯುತ್ತಮ ಶಾಲೆಯಾಗಿದ್ದು, ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭೇಟಿನೀಡಿ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ. ಹಲವಾರು ತರಬೇತಿಗಳು ಹಾಗೂ ಕಾರ್ಯಾಗಾರಗಳನ್ನು ಉತ್ತಮವಾಗಿ ಸಂಘಟಿಸಿ, ನಿರ್ವಹಿಸಿ, ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೇಯ ಶಾಲೆಗೆ ಸಲ್ಲುತ್ತದೆ.

ಒಟ್ಟಿನಲ್ಲಿ ವಸತಿ ಶಾಲೆ ಎಂದರೆ ಹೀಗಿರಬೇಕು ಎನ್ನುವಂತೆ ಎಲ್ಲಾ ರೀತಿಯಲ್ಲಿಯೂ ಅತ್ಯುತ್ತಮ ಶಾಲೆಯಾಗಿದ್ದು, ಇಲಾಖೆಯ ಹೆಮ್ಮೆಯಾಗಿರುತ್ತದೆ.

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS