ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಅರಕೇರಿ, ವಿಜಯಪುರ (ಸಿ.ಬಿ.ಎಸ್.ಇ)

ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು.

ಸುದ್ದಿ ಮತ್ತು ಘಟನೆಗಳು

ರಾಘವೇಂದ್ರ ಟಿ.
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ

ರೇಖಾ ಬಾರ್ಕಿ
ಪ್ರಾಂಶುಪಾಲರು

ಸುತ್ತೋಲೆಗಳು ಮತ್ತು ಅಧಿಸೂಚನೆಗಳು

Notification 2 (2021-12-28 16:45:00)

Notification 1 (2021-12-28 16:44:42)

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಅರಕೇರಿ, ವಿಜಯಪುರ (ಸಿ.ಬಿ.ಎಸ್.ಇ)

ವಿಜಯಪುರ-ಸೋಲ್ಲಾಪುರ ಎನ್. ಎಚ್- ೫೨ಗೆ ಹೊಂದಿಕೊಂಡಿರುವ ಅರಕೇರಿಯಲ್ಲಿ ಸನ್ 2007ರಲ್ಲಿ ಕರ್ನಾಟಕ ಘನ ಸರಕಾರ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳಿಗಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯನ್ನು ೨೦೦೭-೦೮ರಲ್ಲಿ ವಿಜಯಪುರದ ಸರಕಾರಿ ಹಳೆಯ ದವಾಖಾನೆ ಆವರಣದಲ್ಲಿ ಕೇವಲ ೫ ಜನ ಹೊರಗುತ್ತಿಗೆ ಶಿಕ್ಷಕರೊಂದಿಗೆ ೬ ನೇ ತರಗತಿಯನ್ನು ೩೫ ಮಕ್ಕಳಿಂದ ಪ್ರಾರಂಭಿಸಿದ್ದು, ೨೦೧೫ರಲ್ಲಿ ಸ್ವಂತ ಕಟ್ಟಡವನ್ನು ಅರಕೇರಿಯಲ್ಲಿ ಹೊಂದಿ, ೨೦೧೬ರಲ್ಲಿ ಕೆ.ಪಿ.ಎಸ್.ಸಿ ಮೂಲಕ ಖಾಯಂ ಸಿಬ್ಬಂದಿಗಳನ್ನು ನೇರ ನೇಮಕಾತಿ ಹೊಂದಿ ಪ್ರಸ್ತುತ ೬ನೇ ತರಗತಿಯಿಂದ ೧೦ನೇ ತರಗತಿಯ ವರೆಗೆ ಗುಣಮಟ್ಟ ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದೆ. ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯರು ವೈದ್ಯಕೀಯ, ಇಂಜಿನೆರಿಂಗ್, ನರ್ಸಿಂಗ್ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಶಾಲೆಯು ಸುಸಜ್ಜಿತವಾದ ಭವ್ಯವಾದ ಶಾಲಾ ಸಂಕೀರ್ಣ ಎರಡು ವಿದ್ಯಾರ್ಥಿನಿಯರ ವಸತಿ ನಿಲಯಗಳು, ಒಂದು ಭೋಜನಾಲಯ ಹಾಗೂ ಮೌಲಾನಾ ಆಜಾದ ಭವನ, ಹೊರಾಂಗಣ ಜಿಮ್, ಒಳಾಂಗಣ ಜಿಮ್ ಮತ್ತು ಆಟದ ಮೈದಾನವನ್ನು ಹೊಂದಿದ್ದು, ಪ್ರಸ್ತುತ ೨೮೦ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಸದರಿ ಶಾಲೆಯು ಹೆಣ್ಣು ಮಕ್ಕಳ ಶಾಲೆಯಾಗಿರುವದಿಂದ ಯಾವತ್ತು ಮಕ್ಕಳ ಹಿತದೃಷ್ಠಿಯಿಂದ ೨೪ ಗಂಟೆಗಳ ಸಿ. ಸಿ. ಟಿವಿಗಳ ವ್ಯವಸ್ಥೆಯಿದ್ದು ಅವು ರ‍್ಪಗಾವಲಿನಂತೆ ಸೇವೆ ಒದಗಿಸುತ್ತದೆ,
ಸದರಿ ಶಾಲೆಯು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ ಹಾಗೂ ಸಾರ್ವಾಜನಿಕ ಶಿಕ್ಷಣ ಇಲಾಖೆಯಿಂದ ಬಂದ ಎಲ್ಲಾ ನಿಯಮಗಳು ಪಾಲಿಸುತ್ತಾ ಮಕ್ಕಳಿಗೆ ನಿಯಮನುಸಾರ ಪರೀಕ್ಷೆಗಳು,  ಎಲ್ಲಾ ಆಚರಣೆಗಳು, ಜಯಂತಿಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕೂಡಾ ಹಮ್ಮಿಕೊಳ್ಳುತ್ತಾ ಮಕ್ಕಳ ಸೃಜನಾತ್ಮಕ ಮತ್ತು ರ್ಸವೋತೊಮುಕ ಅಭಿವೃದ್ಧಿಗೆ ಶ್ರಮಿಸುತ್ತಿದೆ, ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ, ತಾಲ್ಲೂಕ ಮಟ್ಟದ ವಿಜ್ಞಾನ & ಗಣಿತ ವಸ್ತು ಪ್ರರ್ದಶನ ಸ್ಪರ್ದೆ ಹಾಗೂ ತಾಲ್ಲೂಕಾ ಮಟ್ಟದ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ಯಶಸ್ವಿಯಾಗಿ ನಿರ್ವಹಿಸಿದ ರ್ಕಿತಿ ನಮ್ಮ ಶಾಲೆಗೆ ಸಲ್ಲುತ್ತದೆ.

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS